Singara Siriye kannada song lyrics - Kantara | Vijay Prakash|Ananya Bhat |Ajaneesh Loknath |Rishab Shetty|Hombale Films Lyrics - Vijay Prakash, Ananya Bhat,Nagraj panar valtur

Singer | Vijay Prakash, Ananya Bhat,Nagraj panar valtur |
Composer | Rishab Shetty |
Music | B Ajaneesh Loknath |
Song Writer | Rishab Shetty |
Singara Siriye kannada song lyrics
ಬತ್ತಾತೊಳು ಕೈಗೆ ಮಡಿ ಉಳೆಸಿದ
ಮದ್ವಿ ಹೋದಣ್ಣ ಬರಲಿಲ್ಲ
ಮದ್ವಿ ಹೋದಣ್ಣ ಬರಲಿಲ್ಲ ಬಸರೂರ
ಹೂವ ಗಂಟನ್ನ ತೆಗೆದೀಡ
ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ
ಮಂದಹಾಸ ಆಹಾ
ನಲುಮೆಯಾ ಶ್ರಾವಣ ಮಾಸ
ಮುದ್ದಾದ ಮಾಯಾಂಗೆ
ಮೌನದ ಸಾರಂಗೆ
ಮೋಹದ ಮದರಂಗೆ
ನನ್ನ ಹಾಕಿದೆ ಮುಂಗುರುಳ ಸೋಕೆ
ಮಾತಾಡುವ ಮಂದಾರವೇ
ಕಂಗೊಳಿಸಬೇಡಾ ಹೇಳದೇ
ನಾನೇತಕೆ ನಿನಗ್ಹೇಳಲಿ
ನಿನ್ನ ಮೈಯ ತುಂಬಾ ಕಣ್ಣಿದೆ
ಮನದಾಳದ ರಸ ಮಂಚದೀ
ರಂಗೇರಿ ನಿನ್ನ ಕಾದಿದೆ
ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿ ಆಗಿದೆ
ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ
ಮಾಡುಬಾ ಕೊಂಗಾಟವಾ
ಕಣ್ಣಿಗೆ ಕಾಣೋ ಹೂಗಳೆಲ್ಲ
ಏನೋ ಕೇಳುತಿವೆ
ನಿನ್ನಯ ನೆರಳ ಮೇಲೆ ನೂರು
ಚಾಡಿ ಹೇಳುತಿವೆ
ಏ ಸಿಂಗಾರ ಸಿರಿಯೇ
ಅಂಗಾಲಿನಲೇ ಬಂಗಾರ ಆಗೆ ಬಾ ಮಾಯೇ
ಗಾಂಧಾರಿಯಂತೆ ಕಣ್ಮುಚ್ಚಿ ಹೊಂಗನಸ ಅರಸೊ ಛಾಯೇ
ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ
ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ ಮಾಡುವೆ ...
ಸೌಗಂಧದ ಸುಳಿಯಾಗಿ ನೀ
ನನ್ನೆದೆಗೆ ಬೇಲಿ ಹಾಕಿದೆ
ನಾ ಕಾಣುವ ಕನಸಲ್ಲಿಯೇ
ನೀನ್ಯಾಕೆ ಬೇಲಿ ಹಾರುವೆ
ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದ ಮಗು ಹಠಮಾಡಿದೆ
ಮಾಡುಬಾ ಕೊಂಗಾಟವಾ
ಸುಂದರವಾದ ಸೋಜಿಗವೆಲ್ಲಾ
ಕಣ್ಣಾ ಮುಂದೆ ಇದೆ
ಬಣ್ಣಿಸಬಂದ ರೂಪಕವೆಲ್ಲಾ
ತಾನೇ ಸೋಲುತಿದೆ
ಏ ಮಂದಹಾಸ ಆಹಾ
ನಲುಮೆಯಾ ಶ್ರಾವಣ ಮಾಸ..